ಕೊರಟಗೆರೆ: ತಾಲ್ಲೂಕಿನ ಜಟ್ಟಿ ಅಗ್ರಹಾರದ ಬಳಿಯ ತುಮಕೂರು-ಮಧುಗಿರಿ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ಕಾರು ಮತ್ತು ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ಪರಮೇಶ (32), ದಾವಣಗೆರೆಯ ಶಿವನಾಯ್ಕ(30) ಮೃತರು. ಕೊಡಿಗೇನಹಳ್ಳಿಯ ಸಿದ್ದೇಶ, ನಾಗೇಶ, ಮಧುಗಿರಿಯ ವೆಂಕಟೇಶಬಾಬು, ಮೋಹನ್, ಕೊರಟಗೆರೆ ತಾಲ್ಲೂಕಿನ ಶಾಂತಲಿAಗಯ್ಯನ ಪಾಳ್ಯದ ನಾಗೇಶ ಗಾಯಗೊಂಡವರು.
ದಾಬಸ್ಪೇಟೆಯಲ್ಲಿ ಸ್ನೇಹಿತನ ಮದುವೆ ಕಾರ್ಯ ಮುಗಿಸಿ, ತುಮಕೂರಿನಲ್ಲಿ ಒಬ್ಬ ಸ್ನೇಹಿತನನ್ನು ಮನೆಗೆ ಬಿಟ್ಟು ಕೊಡಗೇನಹಳ್ಳಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಮಧುಗಿರಿ ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸಿಪಿಐ ಕೆ.ಸುರೇಶ್, ಪಿಎಸ್ಐ ಜಿ.ಚೇತನ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಕಾರಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿಗೆ ಲಾರಿ ಡಿಕ್ಕಿ: ಇಬ್ಬರು ಯುವಕರ ಸಾವು
Leave a comment