ಮಂಡ್ಯ: ನಮ್ಮ ದಿನ ನಿತ್ಯದ ಬದುಕಿನಲ್ಲಿ ಯೋಗ ಪ್ರಮುಖವಾಗಿದೆ ಅದ್ದರಿಂದ ಎಲ್ಲರೂ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳು ಬಹುದು ಎಂದು ಶ್ರೀರಂಗಪಟ್ಟಣ ಶಾಸಕರಾದ ಎ.ಬಿ. ರಮೇಶ್ ಬಾಬು ಬಂಡಿಸಿದ್ದೇಗೌಡ ರವರು ತಿಳಿಸಿದರು.
ಅವರು ಇಂದು ನಾಡ ಹಬ್ಬ ಶ್ರೀರಂಗಪಟ್ಟಣ ಎರಡನೇ ದಿನದ ದಸರಾ ಅಂಗವಾಗಿ ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ದಸರಾ ವೈವಿಧ್ಯಮಯ ಯೋಗ ಪ್ರದರ್ಶನವನ್ನು ಆಯೋಜಿಸಲಾಯಿತು.
ಅಪರ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಎಲ್.ನಾಗರಾಜ್ ರವರು ಮಾತನಾಡಿ ಯೋಗ ದೇಹ ಮತ್ತು ಮನಸ್ಸನ್ನು ಸಮನ್ವಯಗೊಳಿಸುವ ಒಂದು ಪ್ರಕ್ರಿಯೆಯಾಗಿದೆ. ಇದೊಂದು ದಿವ್ಯಔಷಧ ಪ್ರಸಾರಣವಾಗಿದೆ ಮತ್ತು ಭಾರತೀಯರು ಪ್ರಪಂಚಕ್ಕೆ ನೀಡಿದ ಅತ್ಯುತ್ತಮವಾದ ಸಂಶೋದನೆ ಎಂದರು.
ಇತ್ತೀಚಿನ ದಿನಗಳಲ್ಲಿ ಯೋಗ ಶಾಲೆಗಳು ಹೆಚ್ಚುತ್ತಿರುವುದು ಗಮನಾರ್ಹ ವಿಷಯವಾಗಿದೆ ಎಲ್ಲರೂ ಪ್ರತಿ ನಿತ್ಯವೂ ಯೋಗ ಅಭ್ಯಾಸವನ್ನು ಮಾಡುವುದು ಉತ್ತಮ ಆರೋಗ್ಯಕ್ಕೆ ಅವಶ್ಯಕ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆಯುಷ್ ವೈಧ್ಯಾಧಿಕಾರಿ ಡಾ.ಸೀತಾಲಕ್ಷ್ಮಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್.ನಿರ್ಮಾಲ, ಎ.ಎಫ್.ಐ.ನ ಅಧ್ಯಕ್ಷರಾದ ಕಲಾಧರ್, ಶ್ರೀರಂಗಪಟ್ಟಣ ಆಯುಷ್ ವೈಧ್ಯಾಧಿಕಾರಿ ವೆಂಕಟೇಶ್, ಯೋಗ ಗುರುಗಳಾದ ಸತ್ಯನಾರಾಯಣ ಶಾಸ್ತ್ರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಯೋಗ ಪಟುಗಳು ಹಾಜರಿದ್ದರು.
ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಿ: ಎ.ಬಿ. ರಮೇಶ್ ಬಾಬು ಬಂಡಿಸಿದ್ದೇಗೌಡ
Leave a comment