ಕೆ.ಆರ್.ಪೇಟೆ: ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಬಂದ್ ಇರುವುದಿಲ್ಲ ಬದಲಾಗಿ ಬಂಡಿಹೊಳೆ ಬಳಿ ಹೇಮಾವತಿ ನದಿಗೆ ಇಳಿದು ಪ್ರತಿಭಟನೆ ನಡೆಸಲಾಗುವುದು. ನಂತರ ತಹಸೀಲ್ದಾರ್ ಕಚೇರಿಗೆ ವರೆಗೆ ಬೈಕ್ ಜಾಥ ನಡೆಸಿ ತಾಲ್ಲೂಕು ಕಚೇರಿ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಾಲ್ಲೂಕು ಕಾವೇರಿ- ಹೇಮಾವತಿ ಹಿತರಕ್ಷಣಾ ಸಮಿತಿಯು ತಿಳಿಸಿದೆ. ಸೆ.26ರಂದು ಕೆ.ಆರ್.ಪೇಟೆ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸೆ.29ರಂದು ಕೆ.ಆರ್.ಪೇಟೆ ಬಂದ್ ನಡೆಸದೇ ಇರಲು ತೀರ್ಮಾನಿಸಲಾಗಿದೆ. ಹಾಗಾಗಿ ಎಲ್ಲಾ ವರ್ತಕರು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಕಾವೇರಿ ಹೇಮಾವತಿ ಹಿತರಕ್ಷಣಾ ಸಮಿತಿಯು ತಿಳಿಸಿದೆ.
ಕಾವೇರಿ ನ್ಯಾಯಾಧೀಕರಣ ಸಮಿತಿ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿಸಮರ್ಥವಾಗಿ ವಾದಮಂಡಿಸದ ರಾಜ್ಯ ಸರ್ಕಾರವು ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಿರುವ ನೀರನ್ನು ತಮಿಳುನಾಡಿಗೆ ಹರಿಸುವ ಮೂಲಕ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ರೈತರ ಬಗ್ಗೆ ಲಘುವಾಗಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಷರತ್ ಕ್ಷಮೆಯಾಚಿಸಬೇಕು ಎಂದು ಪ್ರಗತಿಪರ ಸಂಘಟನೆಗಳು ಹಾಗೂ ರೈತಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಕನ್ನಡಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಕರ್ನಾಟಕ ಬಂದ್ಗೆ ನಮ್ಮ ನೈತಿಕ ಬೆಂಬಲವಿದೆಯೇ ಹೊರತು ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳು ಸೇರಿದಂತೆ ಯಾವುದೇ ವ್ಯವಹಾರಗಳಿಗೆ ನಾವು ತೊಂದರೆ ಕೊಡುವುದಿಲ್ಲ. ಕೆ.ಆರ್.ಪೇಟೆ
ತಾಲೂಕಿನಲ್ಲಿ ಎಂದಿನಂತೆ ದೈನಂದಿನ ವ್ಯವಹಾರಗಳು ನಡೆಯಲಿದ್ದು ತಾಲೂಕಿನ ಜನತೆ ತಮ್ಮ ವ್ಯಾಪಾರ ವ್ಯವಹಾರಗಳನ್ನು ನಡೆಸಬೇಕು ಎಂದು ರೈತಹೋರಾಟಗಾರ ಕಾವೇರಿ, ಹೇಮಾವತಿ ನದಿ ನೀರು ಹಿತರಕ್ಷಣಾ ಸಮಿತಿಯ ಸಂಚಾಲಕ ಮರುವನಹಳ್ಳಿ ಶಂಕರ್ ಮನವಿ ಮಾಡಿದರು.
ಕೆ.ಆರ್.ಪೇಟೆ ಬಂದ್ ಇಲ್ಲ: ನಾಳಿನ ಕರ್ನಾಟಕ ಬಂದ್ಗೆ ನಮ್ಮ ನೈತಿಕ ಬೆಂಬಲವಿದೆ ಆದರೆ ಅಂಗಡಿಗಳು ಹೋಟೆಲ್ಗಳ ಬಾಗಿಲು ಮುಚ್ಚಿಸಿ ಬಂದ್
ನಡೆಸದೇ ಹೋರಾಟಗಾರರಾದ ನಾವೆಲ್ಲರೂ ತಾಲೂಕಿನ ಹೇಮಗಿರಿಯ ಬಳಿ ಹೇಮಾವತಿ ನದಿಗೆ ಇಳಿದು ಪ್ರತಿಭಟನೆ ನಡೆಸಿ ಮಧ್ಯಾಹ್ನ 1 ಗಂಟೆಯ ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸುತ್ತೇವೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ಪದವೀಧರ ಘಟಕದ ತಾಲೂಕು ಅದ್ಯಕ್ಷ ಸಿ.ಬಿ.ಚೇತನಕುಮಾರ್, ಮದನ್, ಕರ್ನಾಟಕ ರಕ್ಷಣಾ ಸೇನೆಯ ತಾಲೂಕು ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ಪೃಥ್ವಿ, ಜಯಕರ್ನಾಟಕ ಸಂಘಟನೆಯ ಕೆ.ಎಲ್. ಮಹೇಶ್, ಮಂಗಳಮ್ಮ, ಮಧುಶ್ರೀ, ಒಕ್ಕಲಿಗರ ಸಂಘಟನೆಯ ಮಹಿಳಾ ವಿಭಾಗದ ತಾಲೂಕು ಅಧ್ಯಕ್ಷೆ ಪ್ರೇಮನಾಗರಾಜು, ಉಪಾಧ್ಯಕ್ಷರಾದ ಮೂಡನಹಳ್ಳಿ ಮಧುಶ್ರೀ, ತಾಲ್ಲೂಕು ಜನ ಜಾಗೃತಿ ಸಮಿತಿ ಸಂಚಾಲಕ ಕುಮಾರಸ್ವಾಮಿ, ಹೊಸಹೊಳಲು ಗೋಪಿ, ಪಿ.ಕೆ.ಜಿ.ಮಹೇಶ್, ಆಟೋ ವಾಸು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
ಕೆ.ಆರ್.ಪೇಟೆ ಬಂದ್ ಇಲ್ಲ
Leave a comment